ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

ಏನಂತೀರೀ? Enantheeri?

ಯೋಗ ಎಂಬುದು ನಮ್ಮ  ಭಾರತೀಯರ ಪರಂಪರೆಯ ಒಂದು ಬಹುಮುಖ್ಯ ಅಂಗವಾಗಿದೆ. ನಮ್ಮ  ಋಷಿಮುನಿಗಳ ಸಹಸ್ರಾರು ವರ್ಷಗಳ ಪರಿಶ್ರಮದ ಫಲವೇ ಯೋಗಾಸನ. ಇತರೇ ಎಲ್ಲಾ ವ್ಯಾಯಾಮಗಳು ಕೇವಲ ದೈಹಿಕ ಸಧೃಡತೆ ಕೊಟ್ಟರೆ  ಯೋಗಾಸನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಡೃಡತೆ ಕೊಡುತ್ತದೆ ಎಂಬುದು ಈಗ ಜಗಜ್ಜಾಹೀರಾತಾಗಿರುವ ವಿಷಯ  ಅದಕ್ಕೆಂದೇ ಸಾವಿರಾರು ವರ್ಷಗಳ ಹಿಂದೆ ಸಡೃಡ ಆರೋಗ್ಯಕ್ಕಾಗಿ ದೇವರನ್ನು ನಮಿಸುವುದರೊಂದಿಗೆ ಯೋಗಾಸನ ಮಾಡಬೇಕು ಎಂದು ಭಾರತೀಯ ಋಷಿಮುನಿಗಳು ತೋರಿಸಿಕೊಟ್ಟರು.  ಅದಕ್ಕೆ ಪತಂಜಲಿ ಮಹರ್ಷಿಗಳು  ಒಂದು ರೂಪವನ್ನು ಕೊಟ್ಟು  ಯೋಗ  ಪಿತಾಮಹ ಎನಿಸಿದರು.   ಇಷ್ಟೆಲ್ಲಾ ಪ್ರಯೋಜನವಿದ್ದರೂ ಭಾರತೀಯರಾದ ನಾವುಗಳೇ  ಯೋಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳದ ಕಾರಣ  ಜಗತ್ತಿನ ಮುಂದೆ ಅದನ್ನು  ಸರಿಯಾಗಿ ಪ್ರಚಾರ ಮಾಡದೆ ಪ್ರಸ್ತುತ  ಪಡಿಸಲಾಗಿರಲಿಲ್ಲ.

2014ರಲ್ಲಿ  ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶ್ರೀ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯಲ್ಲಿ  ಯೋಗದ ಮಹತ್ವವನ್ನು ಎತ್ತಿ ತೋರಿಸಿ ಅದರ ಪ್ರಯೋಜನ ಪ್ರಪಂಚದ ಎಲ್ಲರೂ ಪಡೆಯ ಬೇಕೆಂಬ ಸದುದ್ದೇಶದಿಂದ  ಜೂನ್ 21ನೇ ದಿನವನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ  ಪ್ರಸ್ತಾವನೆ ಇಟ್ಟಾಗ,  ಬೇಷರತ್ತಾಗಿ ಸುಮಾರು 140ಕ್ಕೂ ಅಧಿಕ ರಾಷ್ಟ್ರಗಳು ಅದಕ್ಕೆ ಒಪ್ಪಿದ ಪರಿಣಾಮ,   ಜೂನ್ 21 ಅಂತರಾಷ್ಟ್ರೀಯ ಯೋಗದಿನ ಎಂದು ವಿಶ್ವ ಸಂಸ್ಥೆ ಘೋಷಿಸಿತು.  ಮುಂದಿನ ದಿನಗಳಲ್ಲಿ ಸುಮಾರು 190ಕ್ಕೂ ಅಧಿಕ ರಾಷ್ಟ್ರಗಳು ಯಾವುದೇ ಧರ್ಮದ ಅಡೆತಡೆಯಿಲ್ಲದೆ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿ.

ಇದಕ್ಕನುಗುಣವಾಗಿ  ಕಳೆದ ಐದು ವರ್ಷಗಳಿಂದಲೂ ನಮ್ಮ ವಿದ್ಯಾರಣ್ಯಪುರದ ಸುವರ್ಣ ಮಹೋತ್ಸವ ಕ್ರೀಡಾಂಗಣದಲ್ಲಿ  ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಅನೇಕ ಯೋಗಕೇಂದ್ರಗಳು ಮತ್ತು ಯೋಗಾಸಕ್ತರ ಸಹಕಾರದೊಂದಿಗೆ ವಿಶ್ವ ಯೋಗ…

View original post 416 more words

Leave a comment