ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

June 22, 2019

ಏನಂತೀರೀ? Enantheeri?

ಯೋಗ ಎಂಬುದು ನಮ್ಮ  ಭಾರತೀಯರ ಪರಂಪರೆಯ ಒಂದು ಬಹುಮುಖ್ಯ ಅಂಗವಾಗಿದೆ. ನಮ್ಮ  ಋಷಿಮುನಿಗಳ ಸಹಸ್ರಾರು ವರ್ಷಗಳ ಪರಿಶ್ರಮದ ಫಲವೇ ಯೋಗಾಸನ. ಇತರೇ ಎಲ್ಲಾ ವ್ಯಾಯಾಮಗಳು ಕೇವಲ ದೈಹಿಕ ಸಧೃಡತೆ ಕೊಟ್ಟರೆ  ಯೋಗಾಸನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಡೃಡತೆ ಕೊಡುತ್ತದೆ ಎಂಬುದು ಈಗ ಜಗಜ್ಜಾಹೀರಾತಾಗಿರುವ ವಿಷಯ  ಅದಕ್ಕೆಂದೇ ಸಾವಿರಾರು ವರ್ಷಗಳ ಹಿಂದೆ ಸಡೃಡ ಆರೋಗ್ಯಕ್ಕಾಗಿ ದೇವರನ್ನು ನಮಿಸುವುದರೊಂದಿಗೆ ಯೋಗಾಸನ ಮಾಡಬೇಕು ಎಂದು ಭಾರತೀಯ ಋಷಿಮುನಿಗಳು ತೋರಿಸಿಕೊಟ್ಟರು.  ಅದಕ್ಕೆ ಪತಂಜಲಿ ಮಹರ್ಷಿಗಳು  ಒಂದು ರೂಪವನ್ನು ಕೊಟ್ಟು  ಯೋಗ  ಪಿತಾಮಹ ಎನಿಸಿದರು.   ಇಷ್ಟೆಲ್ಲಾ ಪ್ರಯೋಜನವಿದ್ದರೂ ಭಾರತೀಯರಾದ ನಾವುಗಳೇ  ಯೋಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳದ ಕಾರಣ  ಜಗತ್ತಿನ ಮುಂದೆ ಅದನ್ನು  ಸರಿಯಾಗಿ ಪ್ರಚಾರ ಮಾಡದೆ ಪ್ರಸ್ತುತ  ಪಡಿಸಲಾಗಿರಲಿಲ್ಲ.

2014ರಲ್ಲಿ  ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶ್ರೀ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯಲ್ಲಿ  ಯೋಗದ ಮಹತ್ವವನ್ನು ಎತ್ತಿ ತೋರಿಸಿ ಅದರ ಪ್ರಯೋಜನ ಪ್ರಪಂಚದ ಎಲ್ಲರೂ ಪಡೆಯ ಬೇಕೆಂಬ ಸದುದ್ದೇಶದಿಂದ  ಜೂನ್ 21ನೇ ದಿನವನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ  ಪ್ರಸ್ತಾವನೆ ಇಟ್ಟಾಗ,  ಬೇಷರತ್ತಾಗಿ ಸುಮಾರು 140ಕ್ಕೂ ಅಧಿಕ ರಾಷ್ಟ್ರಗಳು ಅದಕ್ಕೆ ಒಪ್ಪಿದ ಪರಿಣಾಮ,   ಜೂನ್ 21 ಅಂತರಾಷ್ಟ್ರೀಯ ಯೋಗದಿನ ಎಂದು ವಿಶ್ವ ಸಂಸ್ಥೆ ಘೋಷಿಸಿತು.  ಮುಂದಿನ ದಿನಗಳಲ್ಲಿ ಸುಮಾರು 190ಕ್ಕೂ ಅಧಿಕ ರಾಷ್ಟ್ರಗಳು ಯಾವುದೇ ಧರ್ಮದ ಅಡೆತಡೆಯಿಲ್ಲದೆ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿ.

ಇದಕ್ಕನುಗುಣವಾಗಿ  ಕಳೆದ ಐದು ವರ್ಷಗಳಿಂದಲೂ ನಮ್ಮ ವಿದ್ಯಾರಣ್ಯಪುರದ ಸುವರ್ಣ ಮಹೋತ್ಸವ ಕ್ರೀಡಾಂಗಣದಲ್ಲಿ  ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಅನೇಕ ಯೋಗಕೇಂದ್ರಗಳು ಮತ್ತು ಯೋಗಾಸಕ್ತರ ಸಹಕಾರದೊಂದಿಗೆ ವಿಶ್ವ ಯೋಗ…

View original post 416 more words

ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ

May 15, 2019

ಸಸರ್ವಂ ಕೃಷ್ಣಾರ್ಪಣಮಸ್ತು.

ಏನಂತೀರೀ? Enantheeri?

ನಮ್ಮ ಸ್ನೇಹಿತರ ವಾಟ್ಯಾಪ್ ಗುಂಪಿನಲ್ಲಿ ಪ್ರತಿನಿತ್ಯ ವಿವಿಧ ದೇವಾಲಯಗಳ ಮತ್ತು ದೇವರುಗಳ ಚಿತ್ರಗಳನ್ನು ಹಂಚಿಕೊಳ್ಳುವ ಸಂಪ್ರದಾಯ ಬಹಳ ದಿನಗಳಿಂದ ಜಾರಿಯಲ್ಲಿದೆ. ಅದರಂತೆ ನಾನು ಹೋದ ಬಂದ ಕಡೆಯೆಲ್ಲಾ ನೋಡುವ ದೇವರ ಚಿತ್ರಗಳನ್ನು ಜತನದಿಂದ ಸಂಗ್ರಹಿಸಿ ಒಂದೊಂದೇ ಫೋಟೋಗಳನ್ನು ಅದರ ಜೊತೆಗೆ ಸಾಧ್ಯವಾದ ಮಟ್ಟಿಗೆ ಆ ದೇವರುಗಳ ಮಹಾತ್ಮೆ ಅಥವಾ ಆ ಕ್ಷೇತ್ರದ ವಿಶೇಷತೆ ಅಥವಾ ಹೆಗ್ಗಳಿಕೆಯನ್ನು ತಿಳಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಅದೇ ರೀತಿಯಾಗಿ ನನಗೆ ನನ್ನ ಸ್ನೇಹಿತ ಜಗದೀಶ ಪ್ರತೀ ದಿನವೂ ಉಡುಪಿಯ ಕೃಷ್ಣಮಠದ ಫೋಟೋಗಳನ್ನು ಕಳುಹಿಸುತ್ತಿದ್ದ. ಎಲ್ಲದರಲ್ಲೂ ಅದೇ ರಾಶಿ ರಾಶಿ ತುಳಸಿಯ ಅಲಂಕಾರ ಮತ್ತು ಸ್ವಾಮಿಗಳಿಂದ ಮಂಗಳಾರತಿ. ಅರೇ ಇದೇನಿದು ದಿನವೂ ಇದೇ ಫೋಟೋಗಳನ್ನೇ ಕಳುಹಿಸುತ್ತಿದ್ದಾನಲ್ಲಾ ಎಂಬ ಕುತೂಹಲ ಆದರೆ ಅದನ್ನು ಕೇಳಿದರೆ ಅವನೆಲ್ಲಿ ಬೇಜಾರು ಮಾಡಿಕೊಳ್ಳುತ್ತಾನೆಯೋ ಎಂದು ಸುಮ್ಮನಾಗಿದ್ದೆ. ಆದರೆ ನೆನ್ನೆ ನನ್ನ ಮತ್ತೊಬ್ಬ ಪ್ರಾಣ ಸ್ನೇಹಿತ ಹರಿ ಕಳುಹಿಸಿದ ಈ ಲೇಖನ ನನ್ನ ಕುತೂಹಲವನ್ನು ತಣಿಸಿತು. ಹಾಗಾಗಿ ಅದನ್ನು ನಿಮ್ಮೆಲ್ಲರ ಬಳಿ ಹಂಚಿಕೊಳ್ಳುತ್ತಿದ್ದೇನೆ.

ಪ್ರತಿದಿನ ನಡೆಯುವ ಉಡುಪಿಯ ಕೃಷ್ಣನ ಲಕ್ಷ ತುಳಸಿ ಅರ್ಚನೆಯನ್ನು ನೋಡುವುದೇ ಚಂದ. ಇಷ್ಟೊಂದು ತುಳಸಿ ಎಲ್ಲಿಂದ ಬರುತ್ತದೆ? ಯಾರು ತಂದು ಕೊಡುತ್ತಾರೆ? ಪೂಜೆ ಎಲ್ಲ ಮುಗಿದ ಮೇಲೆ ಈ ತುಳಸಿಯನ್ನು ಏನು ಮಾಡುತ್ತಾರೆ? ಹೀಗೊಂದಷ್ಟು ರಾಶಿ, ರಾಶಿ ಪ್ರಶ್ನೆಗಳು ಜೊತೆಯಾಗದೇ ಇರದು…

ಉಡುಪಿಯ ಕೃಷ್ಣ ಮಠಕ್ಕೆ ಹೋದರೆ ಬೆಳ್ಳಂಬೆಳಗ್ಗೆಯೇ ವಿಶೇಷ ಲಕ್ಷ ತುಳಸಿ ಅರ್ಚನೆ ನೋಡಬಹುದು. ಪ್ರತಿದಿನ ತಪ್ಪದೇ ಅರ್ಚನೆ ನಡೆಯುತ್ತದೆ. ವೈಭವೋಪೇತ ಪೂಜೆ ಪುನಸ್ಕಾರದ ನಂತರ- ಇಷ್ಟೊಂದು ತುಳಸಿ ಎಲ್ಲಿಂದ…

View original post 491 more words

ಮಣ್ಣಿನ ಋಣ

March 14, 2019

ಏನಂತೀರೀ? Enantheeri?

ಮೊನ್ನೆ ಶಿವರಾತ್ರಿಯ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಕಾಡುಮಲ್ಲೇಶ್ವರ ಮತ್ತು ದಕ್ಷಿಣ ಮುಖ ನಂದಿ ತೀರ್ಥ ದೇವಸ್ಧಾನಕ್ಕೆ ಹೋಗಿದ್ದೆ. ಆ ದೇವಸ್ಥಾನಗಳ ಸುತ್ತ ಮುತ್ತಲಿನ ಪ್ರದೇಶಗಳನ್ನು ನೋಡುತ್ತಿದ್ದಾಗ. ನಮಗೆ ಋಣವಿದ್ದಿದ್ದಲ್ಲಿ ಇದೇ ಜಾಗದಲ್ಲಿ ನಮ್ಮ ಮನೆ ಇರಬೇಕಿತ್ತು. ನಾವುಗಳು ಐಶಾರಾಮ್ಯಾವಾಗಿ ಇರಬಹುದಿತ್ತೇನೋ ಎಂದು ಯೋಚಿಸಲು ಕಾರಣವಿಷ್ಟೆ. ನಮ್ಮ ತಾತ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ವಾಗ್ಗೇಯಕಾರರು, ಸಾಹಿತಿಗಳು ಮತ್ತು ಅತ್ಯುತ್ತಮ ಗಮಕಿಗಳು. ಮೇಲಾಗಿ ನಮ್ಮ ಊರಾದ ಬಾಳಗಂಚಿಯ ಶಾನುಭೋಗರೂ ಹೌದು. ಆಗಿನ ಕಾಲದಲ್ಲಿ ಅಲ್ಲಿಂದ ಬೆಂಗಳೂರಿನ ಸಾಹಿತ್ಯ ಪರಿಷತ್ತು , ಗಮಕ ಕಲಾಪರಿಷತ್ತುಗಳಿಗೆ ಆಗಾಗ ಕುದುರೆ ಮೇಲೆ ಬಂದು ಹೋಗುತ್ತಿದ್ದರು. ಕೆಲವು ಬಾರಿ ಒಂದೆರಡು ದಿನ ಬೆಂಗಳೂರಿನಲ್ಲಿಯೇ ಉಳಿಯಬೇಕಾದ ಸಂದರ್ಭ ಬಂದಲ್ಲಿ ಮಲ್ಲೇಶ್ವರದಲ್ಲಿ ತಮ್ಮ ಸ್ನೇಹಿತರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರಂತೆ. ಹಾಗೆ ಉಳಿದುಕೊಂಡ ಸಮಯದಲ್ಲಿ ತಮ್ಮ ಸ್ನೇಹಿತರಿಗೆ ದುಡ್ಡಿನ ಅವಶ್ಯಕತೆ ಇದ್ದುದ್ದರಿಂದ ಕಾಡುಮಲ್ಲೇಶ್ವರದ ಸಮೀಪ ಅವರ ಬಳಿಯಿದ್ದ ಸುಮಾರು ಒಂದು ಎಕರೆ ಜಾಗವನ್ನು ಅಂದಿನ ಕಾಲದಲ್ಲೇ ಇಪ್ಪತ್ತು ರೂಪಾಯಿಗಳಿಗೆ ಕೊಂಡು ಕೊಂಡು ಬೆಂಗಳೂರಿಗೆ ಬಂದಾಗಲೆಲ್ಲಾ ಅಲ್ಲಿ ತಮ್ಮ ಕುದುರೆಯನ್ನು ಮೇಯಲು ಬಿಡುತ್ತಿದ್ದರಂತೆ. ಮುಂದೆ ನಮ್ಮ ತಾತನವರಿಗೇ ತುರ್ತಾಗಿ ಹಣ ಬೇಕಿದ್ದರಿಂದ, ಅವರು ಅಂದು ಕೊಂಡಿದ್ದ ಜಾಗವನ್ನು ನಲವತ್ತು ರೂಪಾಯಿಗಳಿಗೆ ಮಾರಿ ಇಪ್ಪತ್ತು ರೂಪಾಯಿ ಲಾಭ ಬಂದಿತಲ್ಲಾ ಎಂದು ಸಂತೋಷದಿಂದ, ಹಣವನ್ನು ಬಳೆಸಿಕೊಂಡಿದ್ದರಂತೆ. ಬಹುಶಃ ಅವರಿಗೆ ಆ ಜಾಗದ ಬೆಲೆ ಮುಂದೆ ಎಷ್ಟಾಗ ಬಹುದಂಬ ಅರಿವಿದ್ದಲ್ಲಿ ಅವರು ಹಾಗೆ ಮಾರದೇ ಇರುತ್ತಿದ್ದರೋ ಏನೋ?. ಅವರು ಅಂದು ಮಾರಿದ ಜಾಗ ಇಂದು ಹಲವಾರು ಜನರಲ್ಲಿ ಹಂಚಿ ಹೋಗಿ ದೊಡ್ಡ…

View original post 37 more words

Hello world!

July 22, 2008

Welcome to WordPress.com. This is your first post. Edit or delete it and start blogging!